Monday, September 25, 2023

ಚಿಕನ್ ದಮ್ ಬಿರಿಯಾನಿ ಕೇವಲ 30 ನಿಮಿಷದಲ್ಲಿ ಮನೆಯಲ್ಲಿ ಮಾಡಿ...

ಚಿಕನ್ ದಮ್ ಬಿರಿಯಾನಿ ಕೇವಲ 30 ನಿಮಿಷದಲ್ಲಿ ಮನೆಯಲ್ಲಿ ಮಾಡಿ...


ಚಿಕನ್‌ ದಮ್‌ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು


- ನಾಲ್ಕು ಕಪ್‌ ಬಾಸುಮತಿ ಅಕ್ಕಿ (ಅಡುಗೆಗೂ ಮೊದಲೇ 45 ನಿಮಿಷ ನೆನೆಸಿಡಿ)


- ಒಂದೂವರೆ ಕೆಜಿ ಚಿಕನ್‌


- 250 ಗ್ರಾಂ ಮೊಸರು


- 2 ಟೇಬಲ್‌ ಸ್ಪೂನ್‌ ಕೆಂಪು ಮೆಣಸಿನ ಪುಡಿ


- 4 ಟೇಬಲ್‌ ಸ್ಪೂನ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌


- ಅರ್ಧ ಟೀ ಚಮಚ ಗರಂ ಮಸಾಲಾ


- ಅರ್ಧ ಟೀ ಚಮಚ ಏಲಕ್ಕಿ ಪುಡಿ


- ಒಂದು ಟೀ ಚಮಚ ಒಣಗಿದ ಗುಲಾಬಿ ಪಕಳೆ


- ಪಲಾವ್‌ ಎಲೆ 2


- ಸ್ಟಾರ್ ಸೋಂಪು-1


- ದಾಲ್ಚಿನ್ನಿ ಕಡ್ಡಿ 2 ಇಂಚು


- ಏಲಕ್ಕಿ 4


- ಲವಂಗ 5-6


- ಕರಿಮೆಣಸು 5-6


- ಉಪ್ಪು - 1 ಚಮಚ (ಅಗತ್ಯಕ್ಕೆ ಅನುಗುಣವಾಗಿ)


- 1 ಟೀ ಚಮಚ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳು


- ಕೊತ್ತಂಬರಿ ಸೊಪ್ಪು - 1 ಕಪ್


- ಪುದೀನ ಎಲೆಗಳು - 1/2 ಕಪ್


- ಎಣ್ಣೆಯಲ್ಲಿ ಹುರಿದ ಈರುಳ್ಳಿ - 1 ಕಪ್


- 1 ನಿಂಬೆ ರಸ


ದಮ್‌ ಬಿರಿಯಾನಿ ರೈಸ್‌ಗೆ ಬೇಕಿರುವ ಸಾಮಗ್ರಿ


- ಒಂದು ದೊಡ್ಡ ಪಾತ್ರೆಯಲ್ಲಿ 12 ಕಪ್‌ ನೀರು (ಅಕ್ಕಿನ ಮೂರು ಪಟ್ಟು ಹೆಚ್ಚು ನೀರು) ಸೇರಿಸಿ


- ಜೀರಿಗೆ - 1 ಟೀಸ್ಪೂನ್


- ಸ್ಟಾರ್ ಸೋಂಪು-2


- ಲವಂಗ-4


- ಹಸಿರು ಏಲಕ್ಕಿ-4


- ದಾಲ್ಚಿನ್ನಿ ಕಡ್ಡಿ - 1 ಇಂಚು


- ಪುದೀನ ಎಲೆಗಳು - 1 ಟೀಸ್ಪೂನ್


- ಉಪ್ಪು - 2 ಚಮಚ (ರುಚಿಗೆ ತಕ್ಕಂತೆ)


- ಎಣ್ಣೆ - 1 ಟೀಸ್ಪೂನ್



ದಮ್‌ ಬಿರಿಯಾನಿ ಮಾಡುವ ವಿಧಾನ....


• ನೀವು ತೆಗೆದುಕೊಂಡ ಒಂದೂವರೆ ಕೆಜಿ ಚಿಕನ್‌ಗೆ 250 ಗ್ರಾಂ ಮೊಸರು, 2 ಟೇಬಲ್‌ ಸ್ಪೂನ್‌ ಕೆಂಪು ಮೆಣಸಿನ ಪುಡಿ, 4 ಟೇಬಲ್‌ ಸ್ಪೂನ್‌ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ.


• ಬಳಿಕ ಅರ್ಧ ಟೀ ಚಮಚ ಚಿಕನ್‌ ಮಸಾಲಾ, ಅರ್ಧ ಟೀ ಚಮಚ ಏಲಕ್ಕಿ ಪುಡಿ, ಪಲಾವ್‌ ಎಲೆ 2, ಸ್ಟಾರ್ ಸೋಂಪು ಹಾಕಿ.


• ದಾಲ್ಚಿನ್ನಿ ತುಂಡು, ಏಲಕ್ಕಿ 4, ಲವಂಗ 5-6, ಕರಿಮೆಣಸು 5-6 ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. 1 ಟೀ ಚಮಚ ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ ಹಾಕಿ.


• ಕೊತ್ತಂಬರಿ ಸೊಪ್ಪು - 1 ಕಪ್, ಪುದೀನ 1/2 ಕಪ್, ಎಣ್ಣೆಯಲ್ಲಿ ಕಂದು ಬಣ್ಣ ಬರುವಂತೆ ಹುರಿದ ಈರುಳ್ಳಿಯನ್ನು ಹಾಕಿ. ಅರ್ಧ ಬೌಲ್‌ ಎಣ್ಣೆ ಹಾಕಿ, 1 ಪೂರ್ತಿ ನಿಂಬೆ ರಸವನ್ನು ಹಿಂಡಿ.


• ಬಳಿಕ ಇದೆಲ್ಲವನ್ನು ಕೈಯಿಂದಲೇ ಚೆನ್ನಾಗಿ ಮಿಶ್ರಣ ಮಾಡಿ, ಕೆಲ ನಿಮಿಷ ನೆನೆಯಲು ಇಡಿ. ಇತ್ತ ನೆನೆದ ಬಳಿಕ ಗ್ಯಾಸ್‌ ಮೇಲೆ ಈ ಮಿಶ್ರಣವನ್ನಿಟ್ಟು 15 ನಿಮಿಷಗಳ ಕಾಲ ಕುಕ್‌ ಮಾಡಿ.


• ಇತ್ತ ಚಿಕನ್‌ 15 ನಿಮಿಷ ಬೇಯುವುದರ ವೇಳೆಯೇ ಪಕ್ಕದ ಇನ್ನೊಂದು ಸ್ಟೋವ್‌ ಮೇಲೆ ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಹಾಕಿ, ನೀರು ಕುದಿಯಲು ಪ್ರಾರಂಭಿಸಿದ ನಂತರ ನೆನಸಿದ ಅಕ್ಕಿಯನ್ನು ಮತ್ತೆ ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಸೇರಿಸಿ.


• ಈ ಕುದಿಯುವ ನೀರಿಗೆ ಮತ್ತೆ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್‌ ಮೊಗ್ಗು, ಪಲಾವ್‌ ಎಲೆ ಹಾಕಿ, ನೆನೆಸಿದ ಅಕ್ಕಿಯನ್ನೂ ಹಾಕಿ.


• ಈ ಅಕ್ಕಿಯು 50% ಬೇಯಿಸುವವರೆಗೆ ಮಾತ್ರ ಹೆಚ್ಚಿನ ಉರಿಯಲ್ಲಿ ಬೇಯಿಸಿ, ತಕ್ಷಣ ಅಕ್ಕಿಯ ನೀರನ್ನು ಬಸಿಯಿರಿ.


• ಇತ್ತ ಇನ್ನೊಂದು ದೊಡ್ಡ ಪಾತ್ರೆ ತೆಗೆದುಕೊಂಡು ಅದಕ್ಕೆ ಮೊದಲಿಗೆ ಚೂರು ಎಣ್ಣೆ ಸವರಿ. 50ಷ್ಟು ಬೆಂದ ಅನ್ನವನ್ನು ಪಾತ್ರೆಯಲ್ಲಿ ಸ್ವಲ್ಪ ಸಮತಟ್ಟಾಗಿ ಸುರಿದುಕೊಳ್ಳಿ.


• ಅದರ ಮೇಲೆ ಒಂದು ಲೇಯರ್‌ ಬೆಂದ ಚಿಕನ್‌ ಮತ್ತು ಸ್ವಲ್ಪ ಗ್ರೇವಿಯನ್ನು ಸುರಿದು ಸಮನಾಗಿ ಮಾಡಿಕೊಳ್ಳಿ. ಮತ್ತೆ ಅದೇ ರೀತಿ ಇನ್ನೊಂದು ಲೇಯರ್‌ ಮಾಡಿಕೊಳ್ಳಿ. ಒಟ್ಟು ಎರಡು ಲೇಯರ್‌ ಚಿಕನ್‌, ಮೂರು ಲೇಯರ್‌ ಅನ್ನ ಹಾಕಿ ರೆಡಿ ಮಾಡಿ.


• ಹೀಗೆ ಸಿದ್ಧವಾದ ರೆಸಿಪಿಯ ಮೇಲ್ಭಾಗಕ್ಕೆ ತುಪ್ಪ ಸುರಿಯಿರಿ. ನಿಮಗೆ ಬೇಕಾದ ಫುಡ್‌ ಕಲರ್‌ ಹಾಕಿಕೊಳ್ಳಿ. ಫ್ರೈ ಮಾಡಲಾದ ಈರುಳ್ಳಿ ಹಾಕಿ, ಮುಚ್ಚಳ ಮುಚ್ಚಿ. 15ನಿಮಿಷ, ಸ್ಟೂಮ್‌ ಮೇಲೆ ತವೆಯನ್ನಿಟ್ಟು, ಅದರ ಮೇಲೆ ಮಿಶ್ರಣದ ಪಾತ್ರೆ ಇಟ್ಟು ಬೇಯಿಸಿ. ಈಗ ದಮ್‌ ಬಿರಿಯಾನಿ ಸವಿಯಲು ಸಿದ್ಧ.



No comments:

Post a Comment